ನಿನ್ನಿಂದಲೇ 20 ನಿಮಿಷ ಕಟ್
Send us your feedback to audioarticles@vaarta.com
ಹೊಂಬಾಳೆ ಫಿಲ್ಮ್ಸ್ ಅವರ ನಿನ್ನಿಂದಲೇ ವಿಜಯಕುಮಾರ್ ಕಿರಗಂದುರ್ ಅವರ ಮೊದಲ ಕಾಣಿಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಏರಿಕ ಫೆರ್ನಾಂಡೇಜ್ ಅಭಿನಯದ ಚಿತ್ರ ಇದೀಗ ಇನ್ನಷ್ಟು ವೇಗ ಹಾಗೂ ಪಸಂದಾಗಿದೆ ತೆರೆಯಮೇಲೆ.
ಪ್ರೇಕ್ಷಕರ ಅಪೇಕ್ಷೆಯಂತೆ ನಿನ್ನಿಂದಲೇ ನಿರ್ದೇಶಕ ಜಯಂತ್ ಪರಂಜಿ, ಸಂಕಲನಕಾರ ಮಾರ್ತಾಂಡ, ನಿರ್ಮಾಪಕರ ಜೊತೆ ಕುಳಿತು ಚಿತ್ರದ ಮಧ್ಯಂತರದ ನಂತರ ಸಿನೆಮವನ್ನು ಮತ್ತೆ ಪರಾಮರ್ಶಿಸಿ 20 ನಿಮಿಷಿಗಳ ಭಾಗದ ಕಡಿತವನ್ನು ಮಾಡಿದ್ದಾರೆ. ಈ ಇಪ್ಪತ್ತು ನಿಮಿಷಿಗಳ ಕಡಿತದಿಂದ ಸಿನೆಮಾವು ಇನ್ನಷ್ಟು ವೇಗವನ್ನು ಗಳಿಸಿಕೊಂಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಕಳೆದ 16ನೇ ಜನವರಿ ಬಿಡುಗಡೆ ಆದ ನಿನ್ನಿಂದಲೇ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜಯಭೇರಿ ಹೊಡೆಯುತ್ತಿರುವುದಕ್ಕೆ ಸಿನೆಮಾದಲ್ಲಿ ಸಾಕಷ್ಟು ಉತ್ತಮ ಅಂಶಗಳನ್ನು ಪ್ರೇಕ್ಷಕರು, ಮಾಧ್ಯಮದವರು ಗುರುತಿಸಿರುವುದಕ್ಕೆ ನಿರ್ಮಾಪಕರು ವಂದನೆ ತಿಳಿಸಿದ್ದಾರೆ.
ಚಿನ್ನಿ ಪ್ರಾಕಾಶ್, ಕಲ್ಯಾಣ್ ಮಾಸ್ಟೆರ್ ಹಾಗೂ ರಾಜು ಸುಂದರಂ ಈ ಚಿತ್ರದ ನೃತ್ಯ ನಿರ್ದೇಶಕರು. ಮಣಿ ಶರ್ಮ ಅವರ ಸಂಗೀತ ಇರುವ ಈ ಚಿತ್ರದ ಸಂಕಲನಕಾರ ಮಾರ್ತಾಂಡ ಕೆ ಪ್ರಕಾಶ್, ನಿರ್ದೇಶಕ ಜಯಂತ್ ಸಿ ಪರಂಜಿ ಅವರ ಜೊತೆ ಶಂಕರ್ ಅವರು ಚಿತ್ರಕಥೆ ನೆರವು ನೀಡಿದ್ದಾರೆ. ಪಿ ಜಿ ವಿಂಧಾ ಅವರು ಈ ಚಿತ್ರದ ಛಾಯಾಗ್ರಾಹಕರು.
ಪೋಷಕ ಪಾತ್ರಗಳಲ್ಲಿ ಅವಿನಾಷ್, ತುಲಸಿ ಶಿವಮಣಿ, ಅವಿನಾಷ್ (ಜುಗಾರಿ)ವಿನಾಯಕ್ ಜೋಷಿ, ಸೋನಿಯ ದೀಪ್ತಿ, ಆಲೋಕ್ ಬಾಬು, ತಿಲಕ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ಪ್ರತಾಪ್, ಶ್ರೀ ನಿವಾಸ್ ಪ್ರಭು, ಸಿಹಿಕಹಿ ಚಂದ್ರು, ರೋಹಿಣಿ ರಘುವರನ್ ಹಾಗೂ ಇತರರು ಇದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments